ಕೋಟ: ಸಚ್ಛ ಶನಿವಾರ ಬಾರಿ ಪ್ರಮಾಣ ತ್ಯಾಜ್ಯ ತೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಉಡುಪಿ ಜಿಲ್ಲಾ ಪಂಚಾಯತನ ಸ್ವಚ್ಛ ಶನಿವಾರ ಯೋಜನೆಯ ಅಂಗವಾಗಿ ಇಲ್ಲಿನ ಕೋಟ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿದ ಹೆದ್ದಾರಿ ರಸ್ತೆಗಳ ಸ್ವಚ್ಛಗೊಳಿಸುವ ಕಾರ್ಯಕ್ರಮ ಶನಿವಾರ ಹಮ್ಮಿಕೊಂಡಿತು.

ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿರುವ ಬಾರಿ ಪ್ರಮಾಣದ ತ್ಯಾಜ್ಯಗಳನ್ನು ಹೆದ್ದಾರಿಯಿಂದ ಮುಕ್ತಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್, ಲೆಕ್ಕಾಧಿಕಾರಿ ಶೇಖರ್ ಮರವಂತೆ,ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥೆ ಭವ್ಯ, ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಮಾಲತಿ ಶೇಖರ್, ಪಂಚವರ್ಣ ಸಂಘಟನೆಯ ಪರವಾಗಿ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚಾಯತ್ ಸಿಬ್ಬಂದಿವರ್ಗ, ಘಟಕದ ಸಿಬ್ಬಂದಿಗಳು ಇದ್ದರು.