ಕೆಲಸದ ಬಗ್ಗೆ ಕೀಳರಿಮೆ ಸಲ್ಲದು: ಐಸ್ಕ್ಯಾಂಡಿ ಸುಬ್ಬಣ್ಣ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ನಾವು ಯಾವುದೇ ಕೆಲಸವನ್ನು ಮಾಡುವಾಗ ಆ ಕೆಲಸದ ಬಗ್ಗೆ ಅತೀವವಾದ ಪ್ರೀತಿ ಇರಬೇಕು. ಕೆಲಸ ಯಾವುದೇ ಇರಲಿ ಅದರಲ್ಲಿ ಮೇಲು ಕೀಳು ಎಂಬ ಭಾವನೆ ಇರಬಾರದು. ಅತ್ಯಂತ ಪ್ರಾಮಾಣಿಕತೆಯಿಂದ ನಿಷ್ಠೆಯಿಂದ ದುಡಿಯುವಾಗ ಕೀಳರಿಮೆ ಸಲ್ಲದು ಎಂದು ಕೋಟ ಪರಿಸರದ ಐಸ್ಕ್ಯಾಂಡಿ ಮಾರುವ ಬೀಜಾಡಿ ಸುಬ್ಬಣ್ಣ ಗಾಣಿಗ ನುಡಿದರು.

ಅವರು ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ಆಶ್ರಯದಲ್ಲಿ ನನ್ನ ಕಥೆ ನಿಮ್ಮ ಜೊತೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ನಾನು ಕಳೆದ 55 ವರ್ಷಗಳಿಂದ ಈ ಐಸ್ಕ್ಯಾಂಡಿ ಮಾರುವ ವೃತ್ತಿಯನ್ನು ಮಾಡಿಕೊಂಡು ಬಂದಿದ್ದೇನೆ. ನನಗೆ ಐಸ್ಕ್ಯಾಂಡಿ ಮಾರುವುದರಲ್ಲಿ ಕೀಳರಿಮೆ ಭಾವನೆ ಇಲ್ಲ ಅದು ನನ್ನ ಬದುಕಿಗೆ ಕಾಯಕಲ್ಪ ನೀಡಿ ಬದುಕಿಗೆ ಬೇಕಾದ ಪ್ರೇರಣೆ, ಅಗತ್ಯತೆಗಳನ್ನು ಒದಗಿಸಿಕೊಟ್ಟಿದೆಯಲ್ಲದೆ ನನ್ನ ಬದುಕು ನಿಂತಿರುವುದು ಕೂಡ ಐಸ್ಕ್ಯಾಂಡಿ ಮಾರುವುದರಲ್ಲಿಯೇ ಎಂದರು. 

ವೇದಿಕೆಯಲ್ಲಿ ನವನೀತ್ ಮತ್ತು ಪ್ರೇಕ್ಷಾ ಉಪಸ್ಥಿತರಿದ್ದರು. ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು, ಸೃಷ್ಠಿ ವಂದಿಸಿದರು.