ಕೋಟ: ಹಿರಿಯ ಗುರಿಕಾರ ಮಾರಿಬಲೆ ಕೂಸ ಮೆಂಡನ್ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ಇಲ್ಲಿನ ಕೋಡಿ ಕನ್ಯಾಣದ ಹಿರಿಯ ಮೀನುಗಾರ ಮಾರಿಬಲೆ ಕೂಸ ಮೆಂಡನ್ (93) ವಯೋಸಹಜದಿಂದ ನಿಧನರಾದರು.

ಕನ್ಯಾಣ ಭಾಗದ ಮೊಗವೀರ ಮಹಾಸಭಾದ ಗುರಿಕಾರರಾಗಿ, ಕೋಡಿ ಮಹಾಸತೀಶ್ವರಿ ದೇಗುಲದ ಧಾರ್ಮಿಕ ಮುಂದಾಳಾಗಿ ಗುರುತಿಸಿಕೊಂಡ ಕೂಸಮೆಂಡನ್ ಕರಾವಳಿ ಕಡಲ ಮಕ್ಕಳ ಕೈರಂಪಣಿಯಲ್ಲಿ ಬಲು ಪ್ರಸಿದ್ಧಿ ಪಡೆದಿದ್ದರು.

ಆರು ಜನ ಪುತ್ರರು, ಇರ್ವರು ಪುತ್ರಿಯರನ್ನು ಅಗಲಿದ್ದಾರೆ.