ಕಿರಿಮಂಜೇಶ್ವರ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕಿರಿಮಂಜೇಶ್ವರ ಗ್ರಾಮದ ನ್ಯಾರಿಕೇರಿ ಹತ್ತಿರದ ಕ್ಲಿನಿಕ್ ಒಂದರ ಎದುರುಗಡೆ ರಾ.ಹೆ 66ರ ಪೂರ್ವ ಬದಿಯ ಚರಂಡಿಯ ಬಳಿ 35 ರಿಂದ 40 ವರ್ಷದ ಒರ್ವ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ವ್ಯಕ್ತಿಯು ಕೆಲವು ದಿನಗಳಿಂದ ಈ ಪರಿಸರದಲ್ಲಿ ತಿರುಗಾಡಿಕೊಂಡಿದ್ದು ಮೇ.6ರಿಂದ7ರ ಮಧ್ಯಾವಧಿಯಲ್ಲಿ ಅನಾರೋಗ್ಯ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

5 ಅಡಿ 5 ಇಂಚು ಎತ್ತರವಿದ್ದು, ವ್ಯಕ್ತಿಯು ತೆಲುಗು ಬಾಷೆ ಬಲ್ಲವರಾಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.