ಕೋಡಿ ಹೊಸಬೆಂಗ್ರೆ ಅಂಗನವಾಡಿ ಕೇಂದ್ರ ಪ್ರಾರಂಭೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸಬೆಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಬೇಸಿಗೆ ರಜೆ ಮುಗಿಸಿ ಅಂಗನವಾಡಿ ಕೇಂದ್ರ ಪುನರಾರಂಭೋತ್ಸವ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಿತು.

ಅಂಗನವಾಡಿ ಕೇಂದ್ರವನ್ನು ತಳಿರು ತೋರಣದಿಂದ ಚೆಂದಗೊಳಿಸಿಕೊಂಡು ಪೋಷಕರೊಂದಿಗೆ ಮಕ್ಕಳನ್ನು ಪುಷ್ಪಸಿಂಚನ ಹಾಗೂ ಆರತಿ ಬೆಳಗುದರ ಜೊತೆ ಬರಮಾಡಿಕೊಳ್ಳಲಾಯಿತು.

ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ದೀಪಾ ಬೆಳಗಿಸುದರೊಂದಿಗೆ ಮಕ್ಕಳಿಗೆ ಬಲೂನು ಹಾಗೂ ಸಿಹಿತಿಂಡಿ ನೀಡಿ ಸ್ವಾಗತಿಸಿ ಶುಭ ಹಾರೈಯಿಸಿದರು. 

ಕೋಡಿ ಸಮನ್ವಯ ಸಂಜೀವಿನಿ ಮಾಜಿ ಅಧ್ಯಕ್ಷೆ ದೀಪಾ ಖಾರ್ವಿ, ಶಾರದಾ ಟಿ.ಕುಂದರ್ ಮತ್ತು ಪೋಷಕರು ಉಪಸ್ಥಿತರಿದ್ದರು. 

ಮಕ್ಕಳ ನಲಿಕಲಿಯೊಂದಿಗೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮವನ್ನು ಅಂಗನವಾಡಿ ಶಿಕ್ಷಕಿ ಯಮುನಾ ಎಲ್. ಕುಂದರ್ ನಿರೂಪಿಸಿ, ಅಂಗನವಾಡಿ ಸಹಾಯಕಿ ಸವಿತಾ ವಂದಿಸಿದರು.