ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ರೆಡ್‌ಕ್ರಾಸ್‌ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕದ ಆಶ್ರಯದಲ್ಲಿ ವಿಶ್ವ ರೆಡ್‌ಕ್ರಾಸ್‌ ದಿನಾಚರಣೆ ಕಾರ್ಯಕ್ರಮ ಕಾಲೇಜಿನ ಎ.ವಿ. ಹಾಲ್‌ನಲ್ಲಿ ಜರುಗಿತು. 

ಸಂಪನ್ಮೂಲ ವ್ಯಕ್ತಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಕುಂದಾಪುರದ ಸಭಾಪತಿಗಳಾದ ಜಯಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಯುವ ರೆಡ್‌ಕ್ರಾಸ್‌ನಲ್ಲಿ ಸ್ವಯಂಸೇವಕರ ಮಹತ್ವ ಹಾಗೂ ಪ್ರಪಂಚದಾದ್ಯಂತ ಅದರ ಕಾರ್ಯವೈಖರಿಯ ಬಗ್ಗೆ ವಿವರಿಸಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರು ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಯಲ್ಲಿ ಸೇವಾ ಮನಸ್ಸು. ಅತ್ಯವಶ್ಯಕ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಕುಂದಾಪುರ ಇದರ ಕಾರ್ಯದರ್ಶಿಗಳಾದ ಸತ್ಯನಾರಾಯಣ ಪುರಾಣಿಕ, ಸದಸ್ಯರಾದ ಸೀತಾರಾಮ್ ಶೆಟ್ಟಿ, ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ್ ಹಾಗೂ ಪೃಥ್ವಿಶ್ರೀ ಜಿ. ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅನಗ ಪ್ರಾರ್ಥಿಸಿದರು. ಯುವ ರೆಡ್ಕ್ರಾಸ್ ಸ್ವಯಂಸೇವಕಿ ಪ್ರಿಯಾಂಕ ನಿರೂಪಿಸಿ, ಸುರಭಿ ಸ್ವಾಗತಿಸಿ, ಸಹನಾ ವಂದಿಸಿದರು.