ಕೊಲ್ಲೂರು: ಕಳವಾದ ಚಿನ್ನದ ಸರ, ಹಣದ ಪರ್ಸ್ 2 ಗಂಟೆಗಳಲ್ಲಿ ಪತ್ತೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೊಲ್ಲೂರು: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೇರಳ ರಾಜ್ಯದ ಭಕ್ತರೊಬ್ಬರು ಕಳೆದುಕೊಂಡ 2ಚಿನ್ನದ ಸರ ಹಾಗೂ ಹಣವನ್ನು ಒಳಗೊಂಡ ಪರ್ಸ್‌ನ್ನು ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಪತ್ತೆ ಹಚ್ಚಿ ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಮೂಕಾಂಬಿಕಾ ದೇವಸ್ಥಾನದಲ್ಲಿ ಈ ಬೆಲೆಬಾಳುವ ಸೊತ್ತುಗಳು ಕಳವಾಗಿದ್ದು, ಅಲ್ಲಿನ ಸಿಸಿ ಟಿವಿ ಮುಖೇನ ಪೊಲೀಸರು ಅದನ್ನು ಎರಡು ಗಂಟೆಗಳಲ್ಲಿ ಪತ್ತೆ ಹಚ್ಚಿದ್ದು ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಬುಧವಾರ ಕೊಲ್ಲೂರು ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು ಪಿಎಸ್ಐ ಭೀಮಾಶಂಕರ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.