ಗಂಗೊಳ್ಳಿ: ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗ ಗಂಗೊಳ್ಳಿ ಇದರ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮೇಲ್ ಗಂಗೊಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಅರಣ್ಯ ಇಲಾಖೆ ಅಧಿಕಾರಿ ಸದಾಶಿವ ಕೆ. ವಹಿಸಿದ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಾದ ಸೌಮ್ಯ ಸುಧಾಕರ, ಜ್ಞಾನ ರಮೇಶ, ಹರ್ಷಿತಾ, ಪಲ್ಲವಿ ಸನ್ಮಾನಿಸಿ ಗೌರವಿಸಲಾಯಿತು.
ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿ ಪ್ರಮೋದ ಗಾಣಿಗ, ಉದ್ಯಮಿ ದಯಾನಂದ ಬೆಂಗಳೂರು ಶುಭಾಶಂಸನೆಗೈದರು. ಗಂಗೊಳ್ಳಿ ಜೇಸಿಐ ಕಾರ್ಯದರ್ಶಿ ನಾಗರಾಜ ಖಾರ್ವಿ, ಕಲಾಶ್ರೀ ಶಿಕ್ಷಣ ಪ್ರೇಮಿಗಳ ಬಳಗದ ಅಧ್ಯಕ್ಷೆ ಸುಮಿತ್ರಾ ಜಿ., ಸಮಾಜ ಸೇವಕ ಮಹಮ್ಮದ್ ಹುಸೇನ್ ಗಂಗೊಳ್ಳಿ, ವಿಜೇತ ಕೆ., ಕಾರ್ತಿಕ ಎಂ.ಜಿ. ಜಿ.ಈಶ್ವರ, ರಮೇಶ ಎಂ.ಜಿ., ಜಗದೀಶ್ ಮೇಲ್ಗಂಗೊಳ್ಳಿ, ಸುಧಾಕರ ಜಿ.ಟಿ., ಪಲ್ಲವಿ, ರೇಖಾ, ಜ್ಯೋತಿ ರಮೇಶ್, ಇನ್ನಿತರರು ಉಪಸ್ಥಿತರಿದ್ದರು.
ಸುಮಿತ್ರಾ ಜಿ. ಸ್ವಾಗತಿಸಿದರು. ವಿಜೇತ ಕೆ. ಕಾರ್ಯಕ್ರಮ ನಿರೂಪಿಸಿದರು. ಜಗದೀಶ ಎಂ.ಜಿ. ವಂದಿಸಿದರು.
