ಉಡುಪಿಯ ವಿದ್ವಾನ್ ಮದೂರು ಪಿ. ಬಾಲಸುಬ್ರಹ್ಮಣ್ಯಂ ಅವರು ಈ ಸುಂದರ ಕಾರ್ಯವನ್ನು ದೀಪಜ್ವಲನೆಯ ಮೂಲಕ ಉದ್ಘಾಟಿಸಿದರು. ಕೋಟ ಮಹಿಳಾ ಮಂಡಳಿಯ ಅಧ್ಯಕ್ಷರಾದ ಗೀತಾ ಎ. ಕುಂದರ್, ಖಜಾಂಚಿ ಸುಶೀಲಾ ಸೋಮಶೇಖರ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಂಗೀತ ಶಿಬಿರಕ್ಕೆ ಶುಭ ಹಾರೈಸಿದರು. ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಾಪುರದ ಕೃಷಿಕರಾದ ರಂಗನಾಥ ಉಡುಪರು ವಹಿಸಿದ್ದರು.
ಮಣಿಪಾಲದ ವಿದುಷಿ ಉಷಾ ಹೆಬ್ಬಾರ್, ಕೋಟೇಶ್ವರದ ಸಂಗೀತ ಶಿಕ್ಷಕಿ ಸುಧಾ ರಾಜಗೋಪಾಲ, ಬ್ರಹ್ಮಾವರದ ಸಂಗೀತ ಶಿಕ್ಷಕಿ ಪಲ್ಲವಿ ಕೆದ್ಲಾಯ, ಮತ್ತೋರ್ವ ಸಂಗೀತ ಶಿಕ್ಷಕಿ ಆಶಾ ತಿಮ್ಮಪ್ಪ ಅವರುಗಳು ಮೂರು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಶಿಬಿರಾರ್ಥಿಗಳಿಗೆ ಸಾಕಷ್ಟು ಭಕ್ತಿ ಗೀತೆ, ಭಾವಗೀತೆ, ಶಿಶು ಗೀತೆ, ಶಾಸ್ತ್ರೀಯ ಸಂಗೀತ, ಸುಗಮ ಸಂಘೀತಗಳನ್ನು ಕಲಿಸಿ ಕೊಡುವ ಮೂಲಕ ನಾದ ಸಂಗೀತ ಲಹರಿಯನ್ನೇ ಹರಿಸಿದರು.
ವಿದ್ವಾನ್ ಮದೂರು ಪಿ ಬಾಲಸುಬ್ರಹ್ಮಣ್ಯಂ ರವರ ಸುಮಧುರ ಕಂಠದಿಂದ ಹಾಡಿದ ಗೀತೆಗಳನ್ನು ಕಲಿಯುವ ಮೂಲಕ ಶಿಬಿರದ ಸಮಾರೋಪ ಸಮಾರಂಭ ಗುರುವಾರ ಜರುಗಿತು.
ಸಂಗೀತ ಕಲಿಕೆ ಯೊಂದಿಗೆ ಶಿಬಿರಾರ್ಥಿಗಳಿಗೆ ಮನರಂಜನಾ ಆಟಗಳನ್ನೂ ಏರ್ಪಡಿಸಲಾಗಿತ್ತು ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವೂ ನಡೆಯಿತು. ಶಿಬಿರದ ಮೂರೂ ದಿನವು ಜಿ ಗೋಪಾಲ ಕೃಷ್ಣ ಮಯ್ಯ ಅವರು ಕಾರ್ಯಕ್ರಮ ನಿರ್ವಹಣೆಯನ್ನು ನೆರವೇರಿಸಿದರು.
ಸ್ಮಿತಾ ರಾವ್, ಜ್ಯೋತಿ ಕೆದ್ಲಾಯ, ಸಂಧ್ಯಾ ಪೈ ಮತ್ತಿತರರು ಸಹಕರಿಸಿದರು, ಒಟ್ಟಾರೆ ಕೋಟ ಪರಿಸರವು ಮೂರು ದಿನಗಳು ನಾದ ಸಂಗೀತದ ರಸದೌತಣ ಪಡೆಯಿತು.
