ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಈ ಶಾಲೆ, 23 ವರ್ಷದಿಂದ ನೂರಕ್ಕೆ ನೂರು ಫಲಿತಾಂಶ ದಾಖಲಿಸಿರುವ ಸಾಧನೆ ಮಾಡಿರುವುದು ಕುಂದಾಪುರ ತಾಲ್ಲೂಕಿನ ಏಕೈಕ ಐಸಿಎಸ್ಇ ಪಠ್ಯಕ್ರಮದ ಶಾಲೆ ಇದಾಗಿದೆ.
ಈ ವಿದ್ಯಾ ಸಂಸ್ಥೆಯಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ಸುಮಾರು 1839 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ 683 ಮಕ್ಕಳಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ವಸತಿ, ಪಾಠಶಾಲೆ, ಶೈಕ್ಷಣಿಕ ನೆರವು, ಶಿಸ್ತು – ಎಲ್ಲವನ್ನೂ ಒಟ್ಟಿಗೆ ನೀಡುತ್ತಿರುವ ಈ ಸಂಸ್ಥೆ ಈ ಭಾಗದ ಮಾದರಿ ವಸತಿ ಶಾಲೆಯಾಗಿ ಹೊರಹೊಮ್ಮಿದೆ.
ಈ ವರ್ಷ 270 ವಿದ್ಯಾರ್ಥಿಗಳು ಐಸಿಎಸ್ಇ 10ನೇ ವರ್ಗದ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 180 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 88 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಗ್ರೀಷ್ಮಾ ಬಿ. ಮತ್ತು ಅಹನಿ ಜಿ. 98.೦೦% ಅಂಕದೊಂದಿಗೆ ಪ್ರಥಮ ಸ್ಥಾನ, ಶಮಿತ್ ದೇವಾಡಿಗ, ಪೃಥ್ವಿರಾಜ್ ಶೆಟ್ಟಿ, ಚಿನ್ಮಯ್ ದೀಕ್ಷಿತ್, 97.2೦% ದ್ವಿತೀಯ ಸ್ಥಾನ ಹಾಗೂ ಅದಿತಿ ಪೂಜಾರಿ, ಆದಿತ್ಯ, ಅನನ್ಯ ಸಿ ಹಿರೇಮಠ, ಅರ್ಪಿತಾ ಮೂಲಿಮನೆ, ಅವನಿ ಎ. ಶೆಟ್ಟಿ 97.00% ಅಂಕದೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ನಿರಂತರ ಸಾಧನೆ ಶಾಲೆಯ ಮಾದರಿಯ ಶಿಕ್ಷಣ ತಂತ್ರ, ಶಿಸ್ತಿನ ಪರಿಸರ ಹಾಗೂ ಶಿಕ್ಷಕರ ದಿಟ್ಟ ಸಮರ್ಪಣೆಯ ಫಲದಿಂದ ಈ ಸಾಧನೆ ಸಾಧ್ಯವಾಗಿದೆ. ಇಂತಹ ಫಲಿತಾಂಶವು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ, ಈ ಸಾಧನೆಯ ಹಿಂದೆ ನಿಂತಿರುವುದು ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ನಿರಂತರ ಸಹಕಾರ ನೀಡಿದ ಪೋಷಕರ ಭರವಸೆಯೇ ಕಾರಣವೆಂದು ಶಾಲೆಯ ಪ್ರಾಂಶುಪಾಲರೂ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಶರಣ ಕುಮಾರ ಅವರು ಈ ಗೌರವವನ್ನು ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
