ಗಂಗೊಳ್ಳಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸುಬ್ರಹ್ಮಣ್ಯ ಬಾಯಿರಿ ಅವರಿಗೆ ಬೀಳ್ಕೊಡುಗೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಗಂಗೊಳ್ಳಿ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ, ಇದೀಗ ಪದೋನ್ನತಿಗೊಂಡು ವರ್ಗಾವಣೆಗೊಂಡಿರುವ ಸುಬ್ರಹ್ಮಣ್ಯ ಬಾಯಿರಿ ಅವರಿಗೆ ಶಾಖೆಯ ವತಿಯಿಂದ ಬ್ಯಾಂಕಿನ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಎ.ಜಿ.ಎಂ ಮೋಹನ್‌ದಾಸ್ ಹೆಬ್ಬಾರ್, ಶಾಖಾ ನಿರೀಕ್ಷಕ ರಾಘವೇಂದ್ರ ಉಡುಪ, ತ್ರಾಸಿ ಶಾಖೆಯ ವ್ಯವಸ್ಥಾಪಕ ವೆಂಕಟೇಶ್ ಬಿಲ್ಲವ, ಗಂಗೊಳ್ಳಿ ಶಾಖೆಯ ನೂತನ ವ್ಯವಸ್ಥಾಪಕ ಗಣೇಶ್ ಭಟ್ ಹಾಗೂ ಕಟ್ಟಡದ ಮಾಲೀಕ ವೆಂಕಟೇಶ ಮಲ್ಯ, ಬ್ಯಾಂಕಿನ ಹಿತೈಷಿಗಳು, ಗ್ರಾಹಕರು ಮೊದಲಾವರು ಉಪಸ್ಥಿತರಿದ್ದರು.

ಬ್ಯಾಂಕಿನ ಸಿಬ್ಬಂದಿ ವಿಕ್ರಮ್  ತಗ್ಗರ್ಸೆ ನಿರೂಪಿಸಿ, ಬ್ಯಾಂಕಿನ ಸಿಬ್ಬಂದಿ ಸುಧೀಂದ್ರ ಸ್ವಾಗತಿಸಿ, ಗಣೇಶ್ ಭಟ್ ವಂದಿಸಿದರು.