ಮೂಡ್ಲಕಟ್ಟೆ: ಎಂ.ಐ.ಟಿ ಕುಂದಾಪುರದ ಸಾವಿಷ್ಕರ್-2026 ಎರಡನೇ ದಿನದ ಸಂಜೆಯ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಎಂ.ಐ.ಟಿ ಸಾವಿಷ್ಕರ್-2026 ಎರಡನೇ ದಿನದ ಸಂಜೆಯ ಕಾರ್ಯಕ್ರಮದಲ್ಲಿ ಕಾರವಾರದ ಗವರ್ನಮೆಂಟ್  ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನ ಪ್ರಾಧ್ಯಪರಾದ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಸಾಧನೆಗೈದ ಶ್ರೀನಿವಾಸ್ ಎಂ. ಭಟ್ ಅವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಐ ಎಂ ಜೆ ವಿದ್ಯಾಸಂಸ್ಥೆಗಳ ಚೇರ್ಮನ್ರಾದ ಸಿದ್ಧಾರ್ಥ ಜೆ. ಶೆಟ್ಟಿ, ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಹಾಗೂ ಎಂ ಐ ಟಿ ಕುಂದಾಪುರದ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.