ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಜಿಲ್ಲಾಡಳಿತ, ಸ್ಥಳೀಯಾಡಳಿತ, ಗೀತಾನಂದ ಫೌಂಡೇಶನ್ ಮಣೂರು, ಕೋಡಿ ಪಂಚಾಯತ್ ನೇತೃತ್ವದಲ್ಲಿ ಕೋಡಿ ಗ್ರಾ.ಪಂನಿಂದ ಕೋಟ ಪಂಚಾಯತ್ ವರೆಗಿನ 5ವರೆ ಕಿ.ಮೀ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನದ ಮಣೂರು ಪಡುಕರೆಯಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ ಆನಂದ್ ಸಿ. ಕುಂದರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸಮಾಜಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡ ಆನಂದ್ ಸಿ. ಕುಂದರ್ ವ್ಯಕ್ತಿತ್ವ ಇಡೀ ಸಮಾಜಕ್ಕೆ ಮಾದರಿಯಾಗಿದೆ. ಪಂಚವರ್ಣ ಸಂಘಟನೆ ಇಡೀ ರಾಜ್ಯಕ್ಕೆ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬೀಚ್ ಕ್ಲಿನಿಂಗ್ನಲ್ಲಿ ಹೊಸ ಅಧ್ಯಾಯ ಸೃಷ್ಠಿಸಿದೆ ಎಂದರು.
300ನೇ ವಾರವನ್ನು ಆನಂದ್ ಸಿ ಕುಂದರ್ ರವರಿಗೆ ಪಂಚವರ್ಣ ಸಂಘಟನೆ ಸಮರ್ಪಿಸಿ ಗೌರವಿಸಿತು.
ಈ ವೇಳೆ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಶಿಕ್ಷಣ ಸಂಸ್ಥೆ, ಸಂಘ ಸಂಸ್ಥೆ, ನರ್ಸಿಂಗ್ ಕಾಲೇಜು, ಗೀತಾನಂದ ಫೌಂಡೇಶನ್, ಧರ್ಮಸ್ಥಳ ಗ್ರಾ.ಯೋಜನೆ, ಶೌರ್ಯ ತಂಡ, ರೋಟರಿ ಸಮುದಾಯದಳ ಮೂಡುಗಿಳಿಯಾರು, ತೋಳಾರ್ ಓಷಿಯನ್ ಪ್ರಾಡೆಕ್ಟ್, ಸ್ಥಳೀಯಾಡಳಿತಗಳಿಗೆ ಅಭಿನಂದನಾ ಪತ್ರವನ್ನು ಶಾಸಕರ ಸಮ್ಮುಖದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಬಾಲಕೃಷ್ಣ ಶೆಟ್ಟಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ನಿರ್ದೇಶಕ ತಿಮ್ಮ ಪೂಜಾರಿ, ತೋಳಾರ್ ಓಷಿಯನ್ ಪ್ರಾಡೆಕ್ಟ್ ಮ್ಯಾನೇಜರ್ ಯೋಗೀಶ್ ಕುಮಾರ, ಜಿಲ್ಲಾ ಸ್ವಚ್ಛಭಾರತ್ ಮಿಷನ್ ಸಂಯೋಜಕ ರಘುನಾಥ್, ಕೋಡಿ ಪಂಚಾಯತ್ ಪಿಡಿಒ ರವೀಂದ್ರ ರಾವ್,ಕ್ಯಾಪ್ಸ್ ಫೌಂಡೇಶನ್ ಪ್ರವರ್ತಕ ಸಿಎ ಚಂದ್ರಶೇಖರ ಶೆಟ್ಟಿ, ಕೋಟ ಲಕ್ಷ್ಮೀ ಸೋಮಬಂಗೇರ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಮೇಶ ಆಚಾರ್, ಪಂಚವರ್ಣದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್, ಕೋಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಮೆಂಡನ್, ಗೀತಾ ಖಾರ್ವಿ, ಕೆ.ಎಂ ಎಫ್ ನಿರ್ದೇಶಕ ಶಿವಮೂರ್ತಿ ಉಪಾಧ್ಯಾ, ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ, ಧರ್ಮಸ್ಥಳ ಗ್ರಾ.ಯೋಜನೆಯ ನಾಗೇಶ್, ಉದ್ಯಮಿ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಲಾವತಿ ಅಶೋಕ್ ಸ್ವಾಗತಿಸಿ, ಸುಜಾತ ಬಾಯರಿ ನಿರೂಪಿಸಿ, ರವೀಂದ್ರ ಕೋಟ ವಂದಿಸಿದರು.
