ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೈಕ್‌ಗೆ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಉಡುಪಿ –ಕುಂದಾಪುರ ರಾ.ಹೆ ಬೀಜಾಡಿ ಜಂಕ್ಷನ್ನಲ್ಲಿ ಸಂಭವಿಸಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದ ಪರಸಪ್ಪ ಚಂದಪ್ಪ ಲಮಾಣಿ (57) ಮೃತಪಟ್ಟ ವ್ಯಕ್ತಿ.
ಉಡುಪಿ ಕಡೆಯಿಂದ ಕುಂದಾಪುರದತ್ತ ಲಾರಿ ಚಲಾಯಿಸುತ್ತಿದ್ದ ಸಿಪಾಯಿ ಶಭೀರ ಹುಸೇನ್ ಹಾಜಿ ಇಬ್ರಾಹಿಂ ಅವರ ವಾಹನವನ್ನು ಬೈಕ್ ಸವಾರ ಬಲಗಡೆಯಿಂದ ಓವರ್ಟೇಕ್ ಮಾಡಲು ಯತ್ನಿಸಿದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ತೀವ್ರ ಗಾಯಗೊಂಡು ಮಾತನಾಡುವ ಸ್ಥಿತಿಯಲ್ಲಿರದ ಲಮಾಣಿ ಅವರನ್ನು ಸ್ಥಳೀಯರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷಿಸಿದ ವೈದ್ಯರು, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
