ಅಯೋಧ್ಯ ಫ್ರೆಂಡ್ಸ್ ಕೋಡಿ ಕನ್ಯಾಣ ಇವರ ಆಶ್ರಯದಲ್ಲಿ ಅಯೋಧ್ಯ ಉತ್ಸವ-2026 ಸಾಧಕರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಯೋಧ್ಯ ಫ್ರೆಂಡ್ಸ್ ಕೋಡಿ ಕನ್ಯಾಣ ಇವರ ಆಶ್ರಯದಲ್ಲಿ ಅಯೋಧ್ಯ ಉತ್ಸವ-2026ರ ಕಾರ್ಯಕ್ರಮ ಇತ್ತೀಚಿಗೆ ಕೋಡಿ ಮಹಾಸತೀಶ್ವರಿ ದೇಗುಲದ ಸಮೀಪ ಜರಗಿತು.

ಅಯೋಧ್ಯಾ ಉತ್ಸವವನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿ, ಮಾತನಾಡಿ, ಸಮಾಜ ಕಟ್ಟುವ ಕಾಯಕ ಸಂಘಟನೆಗಳಿಂದ ಸಾಧ್ಯ. ಈ ನಿಟ್ಟಿನಲ್ಲಿ ಅಯೋಧ್ಯಾ ಸಂಘಟನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ, ಸಮಾಜದ ಏಳು ಬಿಳುಗಳನ್ನು ಅರ್ಥೈಸಿ ಮುನ್ನೆಡೆದರ ಯಶಸ್ಸು ತಾನಾಗಿಯೇ ದಕ್ಕುತ್ತದೆ ಎನ್ನುವುದನ್ನು ಈ ಯುವಕ ಪಡೆ ತೊರಿಸಿಕೊಟ್ಟಿದೆ ಎಂದರು.

ಈ ವೇಳೆ ಹುಟ್ಟೂರು ಸನ್ಮಾನವನ್ನು ಕೂಸ ಮೆಂಡನ್ ಮತ್ತು ತಿಮ್ಮ ಪೂಜಾರಿ ಅವರಿಗೆ ಪುರಸ್ಕರಿಸಲಾಯಿತು.

ಅಯೋಧ್ಯ ಪುರಸ್ಕಾರ ಸನ್ಮಾನವನ್ನು ಸ್ಥಳೀಯರಾದ ಸುಬ್ರಾಯ ಐತಾಳ್, ಸುರೇಂದ್ರ ಪೂಜಾರಿ, ಐತ ಆರ್ಕಾಟ್, ಚಂದ್ರಶೇಖರ್ ಅಮೀನ್ ಮತ್ತು ಗುಲಾಬಿ ಅವರಿಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ ಪೂಜಾರಿ ನೆರವೇರಿಸಿದರು.

ಕಡಲ ತಡಿಯ ಕಾಯಕ ದೀವಿಗೆ ಸನ್ಮಾನವನ್ನು ಈಜುಪಟು ಗೋಪಾಲ್ ಖಾರ್ವಿ, ಸಂತೋಷ್ ಸಾಲಿಯನ್, ಶಂಕರ್ ಕುಂದರ್, ಕೊರಗ ಪೂಜಾರಿ,  ರಾಘವೇಂದ್ರ ಕರ್ಕೇರ, ಸದಾಶಿವ ಐತಾಳ್, ಗಣಪ ಪೂಜಾರಿ,  ಅಂಥೋನಿ ಜೇಮ್ಸ್ ಡಿ. ಸೋಜಾ ಮತ್ತು  ಹುಸೇನ್ ಶಾದತ್ ಅವರಿಗೆ ಸಾಂಸ್ಕೃತಿಕ ಚಿಂತಕ ಸುಪ್ರಸಾದ್ ಶೆಟ್ಟಿ, ಗೋವಿಗಾಗಿ ಮೇವು ಜಿಲ್ಲಾ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ನೆರವೇರಿಸಿದರು.

ಅಯೋಧ್ಯಾ ಫ್ರೆಂಡ್ಸ್ ಅಧ್ಯಕ್ಷ ಶಶಿಧರ್ ತಿಂಗಳಾಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಮಾಜಿ ಜಿ.ಪಂ ಸದಸ್ಯ  ಶಂಕರ್ ಎ. ಕುಂದರ್, ಎ.ಪಿ ಎಂಸಿ ನಿಕಟಪೂರ್ವ ಉಪಾಧ್ಯಕ್ಚ ಪಿ. ಕೃಷ್ಣ ಪೂಜಾರಿ, ಶ್ರೀರಾಮ ಪ್ರಸಾದಿತ ಯಕ್ಷಗಾನ ಮಂಡಳಿ ಅಧ್ಯಕ್ಷ ಜಗನ್ನಾಥ್ ಅಮೀನ್, ಪ್ರಗತಿ ಯುವಕ ಸಂಘ ಕೋಡಿ ಕನ್ಯಾಣ ಅಧ್ಯಕ್ಷ ಉದಯ್ ಕಾಂಚನ್, ರಾಮಾಂಜನೇಯ ಆಟೋ ನಿಲ್ದಾಣ ಸಾಲಿಗ್ರಾಮ ಅಧ್ಯಕ್ಷ ಸಂತೋಷ್ ಮೆಂಡನ್ ಉಪಸ್ಥಿತರಿದ್ದರು. 

ಉಪನ್ಯಾಸಕ ಜಿ. ಸಂಜೀವ ಗುಂಡ್ಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಶಮಿತ ಮೂಡುಬೆಳ್ಳೆ ನಿರೂಪಿಸಿ, ವಂದಿಸಿದರು.