ಗಿಳಿಯಾರು ಕುಶಲ ಹೆಗ್ಡೆ ಸ್ಮಾರಕ ಚಾರಿಟೇಬಲ್ ಟ್ರಸ್ಟ್‌ನಿಂದ ರ‍್ಯಾಂಕ್ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ, ಅರ್ಜಿ ಆಹ್ವಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ರಿ. ವತಿಯಿಂದ 2025-26ನೇ ಸಾಲಿನ ಪದವಿ, ಪದವಿ ಪೂರ್ವ ಹಾಗೂ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ವಿಶ್ವ ವಿದ್ಯಾಲಯ ಹಾಗೂ ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಗಳಿಸಿದ ಕುಂದಾಪುರ-ಬೈಂದೂರು ತಾಲೂಕಿನ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ.

ಮಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಕುಂದಾಪುರ-ಬೈಂದೂರು ತಾಲೂಕಿನ ಕಾಲೇಜುಗಳ ಅಂತಿಮ ಪದವಿ ಶಿಕ್ಷಣದಲ್ಲಿ 10 ರ‍್ಯಾಂಕ್ ಒಳಗೆ ಸ್ಥಾನ ಪಡೆದವರು ಮಾಹಿತಿ ಕಳುಹಿಸಬಹುದು.

ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟದ 10ನೇ ರ‍್ಯಾಂಕಿನೊಳಗೆ ಸ್ಥಾನ ಪಡೆದವರು ಮಾಹಿತಿ ಕಳುಹಿಸಬಹುದು. ಪೋಟೋ, ಅಂಕ ಪಟ್ಟಿ ಹಾಗೂ ಕಾಲೇಜು ಪ್ರಾಂಶುಪಾಲರ/ಮುಖ್ಯೋಪಾಧ್ಯಾಯರ ಸಹಿ ಇರುವ ಪತ್ರ ಮೇ.10ರೊಳಗೆ ತಲುಪುವಂತೆ ಕಳುಹಿಸಬೇಕು.

ವಿದ್ಯಾರ್ಥಿ ಸಹಾಯಧನಕ್ಕೆ ಅರ್ಜಿ ಆಹ್ವಾನ:
ಶೇ. 95 ಕ್ಕಿಂತ ಹೆಚ್ಚು ಅಂಕ ಪಡೆದ ಕುಂದಾಪುರ-ಬೈಂದೂರು ತಾಲೂಕಿನ ಪಿಯುಸಿ, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕಾಗಿ ಸಹಾಯಧನ ನೆರವಿಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಪತ್ರದೊಂದಿಗೆ ಸೇರಿದ ಕಾಲೇಜಿನ ಶುಲ್ಕ ರಶೀದಿ ಅಥವಾ ಸೇರ್ಪಡೆ ದಾಖಲೆ ಪತ್ರದ ಪ್ರತಿ, ಅಂಕ ಪಟ್ಟಿ 20-05-2026ರೊಳಗೆ ತಲುಪುವಂತೆ ಕಳುಹಿಸಬೇಕು. 

ಅರ್ಜಿ ಪಡೆಯುವ ಹಾಗೂ ಸಲ್ಲಿಸುವ ವಿಳಾಸ:
"ಕುಂದಪ್ರಭ", ಶ್ರೀ ನಾರಾಯಣಗುರು ಕಾಂಪ್ಲೆಕ್ಸ್, ವೆಸ್ಟ್ ಬ್ಲಾಕ್ ರಸ್ತೆ, ಕುಂದಾಪುರ-576201.

ಹೆಚ್ಚಿನ ವಿವರಗಳನ್ನು ಯು. ಎಸ್. ಶೆಣೈ, ಕಾರ್ಯದರ್ಶಿ - 9448120765.,ಕೆ. ನಾರಾಯಣ- 9448548806 ಇವರಿಂದ ಪಡೆಯಬಹುದು ಎಂದು ತಿಳಿಸಲಾಗಿದೆ.