ಕೋಟ ಕಾರಂತ ಥೀಮ್ ಪಾರ್ಕ್‌ ಮೆರಗು ಪರಿಕರ ಕೋಳಿ ಲೋಕಾರ್ಪಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟದ ಕಾರಂತ ಥೀಮ್ ಪಾರ್ಕಿನ ಇನ್ನಷ್ಟು ಮೆರಗು ಹೆಚ್ಚಿಸುವ ಮೆರಗು ಪರಿಕರ ಕೋಳಿ ಹುಂಜವನ್ನು ಶ್ರೀ ಕ್ಷೇತ್ರ ಅಮೃತೇಶ್ವರಿ ಧರ್ಮದರ್ಶಿ  ಆನಂದ ಸಿ. ಕುಂದರ್ ಅವರು ಲೋಕಾರ್ಪಣೆ ಗೈದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾನ್ಯ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮೆರಗು ಪರಿಕರ ಥೀಮ್ ಪಾರ್ಕಿನ ಮೆರಗನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಶುಭಹಾರೈಸಿದರು.    

ಮುಖ್ಯ ಅಭ್ಯಾಗತರಾಗಿ ನಿವೃತ್ತ ಯೋಧ ಯೋಗೀಶ್ ಪಡುಕರೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯತ್ ಪ್ರಭಾರ ಪಿಡಿಓ ರವೀಂದ್ರ ರಾವ್,ವಾಸು ಪೂಜಾರಿ, ಸುಬ್ರಾಯ ಆಚಾರ್, ರಾಜೀವ ಕುಲಾಲ್, ಹಾಗೂ ಶಿಬಿರದ 5 ತಂಡಗಳ ಮುಖ್ಯಸ್ಥರು ಉಪಸ್ಥಿತರಿದ್ದರು. 

ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಸತೀಶ ವಡ್ಡರ್ಸೆ ವಂದಿಸಿ, ಅನ್ವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.