ಆಶ್ರಮಕ್ಕೆ ನೆರವು:
ಆನಂದ್ ಸಿ. ಕುಂದರ್ ಹುಟ್ಟು ಹಬ್ಬದ ಅಂಗವಾಗಿ ಪ್ರತಿವರ್ಷ ಜಿಲ್ಲೆಯ ಹತ್ತಾರು ಆಶ್ರಮಗಳಿಗೆ ಸುಮಾರು 20ಲಕ್ಷ ರೂ ಅಧಿಕ ನೆರವು ನೀಡಲಾಗುತ್ತಿದ್ದು ಅದರಂತೆ ತಮ್ಮ 78ನೇ ಹುಟ್ಟುಹಬ್ಬಕ್ಕೆ ಸಮಾರು 15ಕ್ಕೂ ಅಧಿಕ ಆಶ್ರಮಗಳಿಗೆ ಆರ್ಥಿಕ ಸಹಾಯದ ಚಕ್ನ್ನು ಹಸ್ತಾಂತರಿಸಿದರು.
ಕೋಟತಟ್ಟುಗ್ರಾ.ಪಂ, ಸಾಲಿಗ್ರಾಮ ಪಟ್ಟಣಪಂಚಾಯತ್ ಶವ ಶೀತಲಿಕೃತ ಯಂತ್ರ ಕೊಡುಗೆ:
ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಸನಿಹದ ಸಾಲಿಗ್ರಾಮ ಪಟ್ಟಣಪಂಚಾಯತ್ಗೆ ಶವ ಶೀತಲಿಕೃತ ಯಂತ್ರ (ಡೆಡ್ ಬಾಡಿ ಫ್ರೀಜರ್) ಅನ್ನು ಕೋಟತಟ್ಟು ಗ್ರಾಮಪಂಚಾಯತ್ ಪಿಡಿಒ ರವೀಂದ್ರ ರಾವ್ ಹಾಗೂ ಮಾಜಿ ಅಧ್ಯಕ್ಷ ಸತೀಶ್ ಕುಂದರ್ ರವರಿಗೆ ಹಸ್ತಾಂತರಿಸಿದರು ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪರವಾಗಿ ಆಂಜನೇಯ ಸೇವಾ ಟ್ರಸ್ಟ್ ಪರವಾಗಿ ಶ್ರೀನಿವಾಸ ಅಮೀನ್,ಶೇಖರ್ ಮರಕಾಲ,ನರಹರಿ ಪೈ ಮತ್ತವರ ತಂಡ ಹಸ್ತಾಂತರಿಸಿಕೊಂಡರು.
ರೆಡ್ ಕ್ರಾಸ್ ಸಂಸ್ಥೆಗೆ ನೆರವು:
ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಕ್ಯಾನ್ಸರ್ ಪೀಡಿತರ ಆರೈಕೆ ಕೇಂದ್ರದ ಕಟ್ಟಡ ಕಾಮಗಾರಿಗೆ ಆನಂದ್ ಸಿ ಕುಂದರ್ 5ಲಕ್ಷ ರೂಗಳ ನೆರವು ನೀಡಿದರು.ಇದರ ಚಕ್ನ್ನು ರೆಡ್ ಕ್ರಾಸ್ ಸಂಸ್ಥೆಯ ಜಯಕರ ಶೆಟ್ಟಿ ನೇತೃತ್ವದ ತಂಡಕ್ಕೆ ಹಸ್ತಾಂತರಿಸಿದರು.
ಬೃಹತ್ ರಕ್ತದಾನದಲ್ಲಿ ಸಂಸ್ಥೆಯ ಕಾರ್ಮಿಕರು ಭಾಗಿ, ಗಣ್ಯರಿಂದ ಶುಭಾಶಯಗಳ ಮಹಾಪೂರ:
ಕುಂದರ್ ಅವರ 78ನೇ ಹುಟ್ಟುಹಬ್ಬದ ಅಂಗವಾಗಿ ಜನತಾ ಆವರಣದಲ್ಲಿ ತಮ್ಮ ಸಂಸ್ಥೆಯ ಕಾರ್ಮಿಕರು ಬೃಹತ್ ರಕ್ತದಾನದಲ್ಲಿ ಭಾಗಿಯಾಗಿ ತಮ್ಮ ಸಂಸ್ಥೆಯ ಮುಖ್ಯಸ್ಥರಿಗೆ ರಕ್ತದಾನದ ಮೂಲಕ ಶುಭಾಶಯ ಕೋರಿದರು.
ಮಣಿಪಾಲ ಮಾಹೆ ಸಂಸ್ಥೆ ಸಿಬ್ಬಂದಿಯನ್ನು ಅಭಿನಂದಿಸಲಾಯಿತು. ಕಾರ್ತಿಕ್ ಆಚಾರ್, ಕುಂದರ್ರವರ ಭಾವಚಿತ್ರವನ್ನು ತಮ್ಮ ಕೈಚಳಕದ ಮೂಲಕ ಅನಾರವಣಗೊಳಿಸಿದರು.
ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಗೀತಾನಂದ ಫೌಂಡೇಶನ್ ಟ್ರಸ್ಟಿ ಗೀತಾ ಎ. ಕುಂದರ್, ನಿರ್ದೇಶಕರಾದ ಪ್ರಶಾಂತ್ ಎ. ಕುಂದರ್, ರಕ್ಷಿತ್ ಎ. ಕುಂದರ್, ವೈಷ್ಣವಿ ಆರ್ ಕುಂದರ್, ದಿವ್ಯಲಕ್ಷ್ಮೀ ಪಿ. ಕುಂದರ್ ,ಮಣಿಪಾಲ ಆಸ್ಪತ್ರೆಯ ನೇತ್ರ ಚಿಕಿತ್ಸಾ ತಜ್ಞ ಡಾ. ಆಯುಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಸ್ಥೆಯ ಹಿರಿಯ ಪ್ರಭಂಧಕ ಶ್ರೀನಿವಾಸ ಕುಂದರ್ ಸ್ವಾಗತಿಸಿದರು. ಮ್ಯಾನೇಜರ್ ಮಿಥುನ್ ಸಹಕರಿಸಿದರು. ಕಾರ್ಯಕ್ರಮವನ್ನು ರವಿಕಿರಣ್ ಕೋಟ ನಿರೂಪಿಸಿದರು.
