ಕೋಡಿ ಕನ್ಯಾಣದಲ್ಲಿ ಅಯೋಧ್ಯ ಉತ್ಸವದ ಅಂಗವಾಗಿ ನೂತನ ಆಟೋ ನಿಲ್ದಾಣದ ಲೋಕಾರ್ಪಣೆ


ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಅಯೋಧ್ಯ ಫ್ರೆಂಡ್ಸ್ ಕೋಡಿ ಕನ್ಯಾಣ ಇದರ ಐದನೇ ವರ್ಷದ ಸಂಭ್ರಮದ ಪ್ರಯುಕ್ತ ಆಯೋಜಿಸಲಾದ ಅಯೋಧ್ಯ ಉತ್ಸವದ ಪ್ರಯುಕ್ತ ಕನ್ಯಾಣದ ಶ್ರೀ ಮಹಾಸತೀಶ್ವರಿ ಆಟೋ ನಿಲ್ದಾಣವನ್ನು ಕೋಟ ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್  ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆನಂದ್ ಸಿ. ಕುಂದರ್ ಸಂಘಟನೆಗಳು ಸಮಾಜದ ಕಣ್ಣು ಈ ನಿಟ್ಟಿನಲ್ಲಿ ಅಯೋಧ್ಯಾ ಫ್ರೆಂಡ್ಸ್ ಗ್ರಾಮಕ್ಕೆ ಪೂರಕವಾದ ಕಾರ್ಯಕ್ರಮ ಆಯೋಜಿಸಿ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಸಮಾಜ ಸೇವಕ ಆನಂದ್ ಸಿ. ಕುಂದರ್ ಅವರ 78ನೇ ವರ್ಷದ ಜನ್ಮದಿನದ ಸವಿನೆನಪಿಗಾಗಿ ಅಯೋಧ್ಯ ಫ್ರೆಂಡ್ಸ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.

ಅಯೋಧ್ಯಾ ಫ್ರೆಂಡ್ಸ್ ಪ್ರಮುಖರಾದ ಜಗನ್ನಾಥ್ ಅಮೀನ್, ರವೀಂದ್ರ ತಿಂಗಳಾಯ ಕೋಟತಟ್ಟು ಪಡುಕರೆ, ಸುರೇಂದ್ರ ಪೂಜಾರಿ ಕೋಡಿ, ಉದಯ್ ಕಾಂಚನ್, ತಿಮ್ಮ ಪೂಜಾರಿ ಕೋಡಿ, ಬಾಬು ಕಾಂಚನ್, ಸುದಿನಾ ಕೋಡಿ, ಸಂತೋಷ್ ಕೋಡಿ ಸೇರಿದಂತೆ ಅಯೋಧ್ಯ ಫ್ರೆಂಡ್ಸ್ ನ ಅಧ್ಯಕ್ಷರುಹಾಗೂ ಸರ್ವ ಸದಸ್ಯರು  ಉಪಸ್ಥಿತರಿದ್ದರು.