ಕುಂದಾಪುರ: ಸಮುದಾಯದಲ್ಲಿನ ಅನಾರೋಗ್ಯಪೀಡಿತರಿಗೆ ಆರ್ಥಿಕ ನೆರವು ನೀಡಿ ಸಂಕಷ್ಟಕ್ಕೆ ಸ್ಪಂದಿಸುತ್ತ ಬಂದಿರುವ ಸಮಾನಮನಸ್ಕರ ಗುಂಪಾದ 'ಟೀಮ್ ಏಕತಾ ಟ್ರಸ್ಟ್' ಸದಸ್ಯರ ಸಮಾಗಮ ಕುಂದಾಪುರದ ಶ್ರೀವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ಯಶಸ್ವಿಯಾಗಿ ನೆರವೇರಿತು.
ಏಳು ವರ್ಷಗಳಿಗೂ ಅಧಿಕ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಟೀಮ್ ಏಕತಾ ಇದುವರೆಗೆ 212 ಫಲಾನುಭವಿಗಳಿಗೆ ಒಟ್ಟು 52.94 ಲಕ್ಷ ರೂ. ಹಸ್ತಾಂತರಿಸಿರುವ ಹಿನ್ನೆಲೆಯಲ್ಲಿ ಗುಂಪಿನ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುಂದಾಪುರ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಸತೀಶ್ ಹಾಗೂ ಟೀಮ್ ಏಕತಾದ ಹಿರಿಯರು ಜೊತೆಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮ ರಹಿತವಾಗಿ ನಡೆದ ಈ ಸಮಾರಂಭವನ್ನು ಟೀಮ್ ಏಕತಾದ ಸುಮಾರು 200 ಸದಸ್ಯರನ್ನೇ ಮುಖ್ಯ ಅತಿಥಿಗಳಾಗಿ ಪರಿಗಣಿಸಿ ಆಯೋಜಿಸಿದ್ದು ವಿಶೇಷವಾಗಿತ್ತು. ಬಂದ ಅಷ್ಟೂ ಸದಸ್ಯರಿಗೆ ವಿಶೇಷ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು. ಅಷ್ಟೂ ಮಂದಿಗೆ ಭೋಜನ ಹಾಗೂ ಐಸ್ಕ್ರೀಮ್ ಸಹಿತ ಸತ್ಕರಿಸಲಾಯಿತು.
