ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳ ಸಭೆಯು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಕ್ತನ ಸಂಘದ ಅಧ್ಯಕ್ಷರಾಗಿ ಬಾಂಡ್ಯ ಸುಧಾಕರ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ರಾಮಕಿಶನ್ ಹೆಗ್ಡೆ, ಕಾರ್ಯಾಧ್ಯಕ್ಷರನ್ನಾಗಿ ವಿಜಯ ಶೆಟ್ಟಿ ಸಟ್ವಾಡಿ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ವಿವೇಕಾನಂದ ಭಂಡಾರಿ ಜಯಶೀಲ ಶೆಟ್ಟಿ, ಸೌಮ್ಯಶ್ರೀ ಬಸ್ರೂರು ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಗಳಾಗಿ ಬಿ. ರತ್ನಾಕರ ಶೆಟ್ಟಿ, ಕಂದಾವರ ಜೊತೆ ಕಾರ್ಯದರ್ಶಿಗಳಾಗಿ ಅಕ್ಷತಾ ಪೈ ಬಿ., ಪ್ರದೀಪ ಕುಮಾರ್ ಶೆಟ್ಟಿ ಆಯ್ಕೆಯಾದರೆ, ಕೋಶಾಧಿಕಾರಿಗಳಾಗಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಆಯ್ಕೆಯಾದರು.
