ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯಕ್ಕೆ ಶೇ.98.27 ಫಲಿತಾಂಶ


ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಗಂಗೊಳ್ಳಿ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಶೇ.100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 44 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 18 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 613 ಅಂಕಗಳನ್ನು ಪಡೆದಿರುವ ಶ್ರೀನಿವಾಸ ವಾಮನ ಪೈ ಶಾಲೆಗೆ ಪ್ರಥಮ ಸ್ಥಾನ ಪಡೆದು ಅತ್ಯುತ್ತಮ ಸ್ಥಾಧನೆ ಮಾಡಿದ್ದಾರೆ.

ಶ್ರೀನಿವಾಸ ವಾಮನ ಪೈ (613), ನಿಯತಿ ಎನ್.ನಾಯ್ಕ್ (605), ಅದಿತಿ ಜಿ.ಎನ್. (598), ಸಾನ್ವಿ ಗಾಣಿಗ (597), ಎಂ.ರಕ್ಷಾ ಪ್ರಭು (596), ಕಾರ್ತಿಕ್ (591), ಶ್ರಾವ್ಯ ವಿ.ಆಚಾರ್ (581), ಶ್ರೀಹರ್ಷ ಅಡಿಗ (580), ಪ್ರಣವಿ ಡಿ.ಖಾರ್ವಿ (571), ಅಭಿನವ ಎ.ಜಿ. (570) ಉತ್ತಮ ಸಾಧನೆ ಮಾಡಿದ್ದಾರೆ.