ಕುಂದಾಪುರ: 2026ನೇ ಸಾಲಿನ ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಸಂಕಲ್ಪ್ ಕುಮಾರ್ ಅವರಿಗೆ 625 ರಲ್ಲಿ 622 ಅಂಕ ಪಡೆದು (99.52%) ರಾಜ್ಯಕ್ಕೆ 4ನೇ ಯಾಂಕ್ ಬಂದಿದ್ದಾರೆ.
ಅವರು ಕುಂಭಾಶಿಯಲ್ಲಿ ನೆಲೆಸಿರುವ ಎಂ.ಐ.ಟಿ. ಮಣಿಪಾಲದಲ್ಲಿ ಪ್ರಾಧ್ಯಾಪಕರಾಗಿರುವ ಡಾI ಸಂಪತ್ ಕುಮಾರ್ ಹಾಗೂ ಎಂ.ಐ.ಟಿ. ಕುಂದಾಪುರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಶಿಲ್ಪಾ ದಂಪತಿಗಳ ಪ್ರಥಮ ಪುತ್ರ.
ಅವರು ಕೋಟ ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ. ಇದಲ್ಲದೆ ಕರ್ನಾಟಕ ಶಿಕ್ಷಣ ಮಂಡಳಿಯ ಸೀನಿಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲೂ "ವಿಶಿಷ್ಟ ಶ್ರೇಣಿಯಲ್ಲಿ" ಉತ್ತೀರ್ಣರಾಗಿದ್ದು ಮಾತ್ರವಲ್ಲ ಪುಣೆಯ ಗಂಧರ್ವ ಮಹಾವಿದ್ಯಾಲಯದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ "ಪ್ರಾವೇಶಿಕ ಪ್ರಥಮ" ಪರೀಕ್ಷೆಯಲ್ಲಿ "ವಿಶಿಷ್ಟ ಶ್ರೇಣಿ" ಗಳಿಸಿದ್ದು, ಈ ಬಾರಿ "ಪ್ರಾವೇಶಿಕ ಪೂರ್ಣ" ಪರೀಕ್ಷೆಯನ್ನೂ ಬರೆದಿರುತ್ತಾರೆ.
