ಗೋವಿಗಾಗಿ ಏಕಮುಖ ಕಾನೂನು ಜಾರಿಯಾಗಲಿ: ಶ್ರೀ ಸಾಯಿ ಈಶ್ವರ ಗುರೂಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಥಮ ಹಂತದಲ್ಲಿ ಗೋವನ್ನ ರಕ್ಷಣೆ ಮಾಡಿದ್ರೆ ನಮ್ಮ ರಾಜ್ಯ ನಮ್ಮ ರಾಷ್ಟ್ರವನ್ನು ಖಂಡಿತವಾಗಿ ನಾವು ಸಂರಕ್ಷಣೆ ಮಾಡಲಿಕ್ಕೆ ಸಾಧ್ಯ ಎಂದು  ಶ್ರೀ ಸಾಯಿ ಈಶ್ವರ ಗುರೂಜಿ ದ್ವಾರಕಾಮಯಿ ಮಠ ಶಂಕರಪುರ ಉಡುಪಿ ಹೇಳಿದರು. 

ಅವರು ಗೋವುಗಳ ರಕ್ಷಣೆ ಮತ್ತು ನಿಷೇಧದ ಬಗ್ಗೆ ಕುಂದಾಪುರ ತಾಲೂಕು ದಂಡಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದವರು. ಸುಮಾರು 8 ಸಾವಿರದ 800 ತಾಲೂಕು ಕೇಂದ್ರಗಳಲ್ಲಿ ಈ ಅಭಿಯಾನ ನಡೆಯಲಿದ್ದು ಇದು ಮೊದಲ ಹಂತದ ಅಭಿಯಾನವಾಗಿರುತ್ತದೆ, ನಾಲ್ಕು ಹಂತದಲ್ಲಿ ಈ ಅಭಿಯಾನ ನಡೆಯಲಿದ್ದು ಪ್ರತ ಮೂರು ತಿಂಗಳಿಗೊಮ್ಮೆ ಹಂತ ಹಂತವಾಗಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಈ ಅಭಿಯಾನ ಆಯೋಜಿಸಲಾಗಿದ್ದು ಗೋವಿಗಾಗಿ ಏಕಮುಖ ಕಾನೂನು ಜಾರಿಯಾಗಬೇಕೆಂದು ಎಲ್ಲಾ ರಾಷ್ಟ್ರೀಯ ಸಂತ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿದ್ದು ಗೋ ಪ್ರೇಮಿಗಳ ಗೋರಕ್ಷಕರ ಹಿಂದೂ ಸಂಘಟನೆಯ ಆಗ್ರಹದ ಜೊತೆಗೆ ಪ್ರತಿ ವರ್ಷ ಏಪ್ರಿಲ್ 27ರಂದು ರಾಷ್ಟ್ರೀಯ ಗೋವುಗಳ ದಿನಾಚರಣೆಯನ್ನಾಗಿ ಆಚರಿಸಬೇಕೆಂದು ಗುರುಜಿಯವರು  ಹೇಳಿದರು.

ಕುಂದಾಪುರ ತಾಲೂಕು ಕೇಂದ್ರ ಉಪ ತಹಶೀಲ್ದಾರರಾದ  ವಿನಯ್ ಎಸ್..ವಿ. ಅವರಿಗೆ ಮನವಿ ನೀಡಲಾಯಿತು. 

ಕಾರ್ಯಕ್ರಮದ ನಿರೂಪಣೆಯನ್ನು ಗೋ ಸಮ್ಮಾನ್ ಅಭಿಯಾನದ ಕುಂದಾಪುರ ತಾಲೂಕು ಪ್ರಮುಖರಾದ ಗಜೇಂದ್ರ ಎಸ್. ಬೇಲೆಮನೆ  ನಿರ್ವಹಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಮಂಡಲ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ, ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ ಸುಧೀರ್ ಕೆ.ಎಸ್., ರಾಮಕ್ಷತ್ರಿಯ ಸಂಘ ಕುಂದಾಪುರ ಅಧ್ಯಕ್ಷರಾದ ಲಕ್ಷ್ಮೀಶ್ ಹವಾಲ್ದಾರ್, ಪ್ರಮುಖರಾದ ರಾಜೇಶ್ ಕಾವೇರಿ ಕುಂದಾಪುರ, ಸತೀಶ್ ಶೆಟ್ಟಿ, ದಿವಾಕರ ಕಡ್ಗಿ, ನಪ್ರಕಾಶ್ ಪೂಜಾರಿ ಬೀಜಾಡಿ, ಭಾಸ್ಕರ್ ಬಿಲ್ಲವ ಹೇರಿಕುದ್ರು, ಹಾಲಾಡಿ ರಮೇಶ್ ಶೆಟ್ಟಿ, ವಿ. ಪ್ರಭಾಕರ್, ಶ್ರೀಮತಿ ಗುಣ ರತ್ನ, ಸಂತೋಷ್ ಶೆಟ್ಟಿ, ಕೆ.ಟಿ ಸತೀಶ್, ರಾಜೇಶ್ ಕಡ್ಗಿ, ರತ್ನಾಕರ ಶೇರಿಗಾರ್, ಮಹೇಶ್ ಶೆಣೈ, ನಾಗರಾಜ್ ಸಂಪಿಕಟ್ಟೆ, ನವೀನ್  ಕೊರ್ಗಿ, ಸಂಪತ್ ಶೇರಿಗರ್, ಶ್ರೀನಾಥ್ ಶೆಟ್ಟಿ ತೆಕ್ಕಟ್ಟೆ, ಗಣೇಶ್ ಬಿಜಾಡಿ, ಪ್ರದೀಪ್ ಕೊಟೇಶ್ವರ, ಶ್ವೇತಾ ಶ್ರೀನಿಧಿ, ರೋಹಿಣಿ ಪೈ, ಕುಂದಾಪುರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ, ಓಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್, ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಎಬಿವಿಪಿ ವಿದ್ಯಾರ್ಥಿಗಳು, ವಿಶ್ವನಾಥ ಕೋಟೇಶ್ವರ, ಗೋಪಾಲ್ ಕೋಟೇಶ್ವರ, ದಯಾನಂದ್, ಯೋಗೀಶ್, ಮಾತೃಶಕ್ತಿ ಸಂಘಟನೆಯ ಪ್ರಮುಖರು,, ಸಂಘಟನೆಯ ಪ್ರಮುಖರು, ಗೋ ಪ್ರೇಮಿಗಳು ಗೋರಕ್ಷಕರು ಮುಂತಾದವರು ಉಪಸ್ಥಿತರಿದ್ದರು.