ಡಾ. ಬಿ.ಬಿ. ಹೆಗ್ಡೆ ಕಾಲೇಜು: ʼನೆಕ್ಸ್ಟ್ - ಜನ್ ಎ.ಐ. ಟೂಲ್ಸ್: "ಟ್ರಾನ್ಸ್ಫಾರ್ಮಿಂಗ್ʼ ಇನ್ನೋವೇಶನ್ ವಿಷಯದ ಕುರಿತು ಕಾರ್ಯಾಗಾರ
ಮುಖ್ಯ ಅತಿಥಿ ಸ್ಕೂಲ್ ಆಫ್ ಐಟಿ ಸ್ಕಿಲ್ಸ್ ಎಂಎಸ್ಡಿಸಿ, ಮಣಿಪಾಲ ಇಲ್ಲಿನ ಸೆಂಟರ್ ಹೆಡ್ ರಾಜಲಕ್ಷ್ಮಿ ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳ ಮಹತ್ವ, ಅವುಗಳ ಬಳಕೆ ಹಾಗೂ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿಯನ್ನು ಒದಗಿಸಿದರು. ಇದೇ ಸಂದರ್ಭ ಮಾಹೆ, ಮಣಿಪಾಲದ ಸ್ಕೂಲ್ ಆಫ್ ಇಂಜಿನಿಯರಿAಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪ್ರಿಯಾ ಕಾಮತ್ ಬಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್, ವಿಭಾಗದ ಪ್ರಾಧ್ಯಾಪಕರಾದ ವಿಲ್ಮಾ ಶೆರಲ್, ಮೇಘಾ, ಮಹೇಶ್ ಪೂಜಾರಿ ಉಪಸ್ಥಿತರಿದ್ದರು.
ಬಿಸಿಎ ವಿಭಾಗದ ವಿದ್ಯಾರ್ಥಿಗಳಾದ ಮನಿಷಾ ಪ್ರಾರ್ಥಿಸಿ, ಅಪೂರ್ವಾ ಡಿ. ಸ್ವಾಗತಿಸಿ. ಸ್ಮಿತಾ ಮತ್ತು ನಿರೀಕ್ಷಾ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಶಿಫಾ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೇಯಾ ವಂದಿಸಿದರು.
