ಕುಂದಾಪುರ: ಎಂಐಟಿಕೆ ವಾರ್ಷಿಕೋತ್ಸವ


ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಕಾಲೇಜು ವಾರ್ಷಿಕೋತ್ಸವವನ್ನು ಆಚರಿಸಲಾಯಿತು. 

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎನ್ ಎಕ್ಸ್ ಪಿ ಸೆಮಿಕಂಡಕ್ಟರ್ ಸಿಎಫ್ಓ ಸುಂದರ್ ರಾಜ್ ಅವರು ಆಗಮಿಸಿ ಇಂದಿನ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಕ್ಕೆ ಸರಿಸಾಟಿಯಾಗಿ ಕ್ಷಮತೆಯನ್ನು  ಬೆಳೆಸಿಕೊಂಡಾಗ ಮಾತ್ರ ಉದ್ಯೋಗಾವಕಾಶಗಳು ಸಿಗಲು ಸಾಧ್ಯ ಎಂದು ತಿಳಿಸಿದರು . 

ಎಂಬಿಎ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪೂಜಾರಿ ಅವರು ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿದರು.  ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಅವರು ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಐ ಎಂ ಜೆ ವಿದ್ಯಾಸಂಸ್ಥೆಗಳ ಡೈರೆಕ್ಟರ್ ಅಕಾಡೆಮಿಕ್ಸ್ ಆದ ಡಾ. ಎಸ್ ಎನ್ ಭಟ್ ಇವರು ಇಂದಿನ ಎ ಐ ಯುಗದಲ್ಲಿ ಗೆಲ್ಲಬೇಕಾದರೆ ಅದಕ್ಕೆ ಸರಿಯಾದ ಕ್ಷಮತೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. 

ಅದೇ ಸಮಯದಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಪ್ರಾಧ್ಯಾಪಕರಾದ ಸುಷ್ಮಾ ಶೆಟ್ಟಿ ಮುಖ್ಯ ಅತಿಥಿಗಳ ಪರಿಚಯವನ್ನು ನೀಡಿದರು.  

ಪ್ರಾಧ್ಯಾಪಕರಾದ  ಫರಾನ, ಧನ್ಯವಾದ ಸಮರ್ಪಿಸಿದರು. ಎಂಬಿಎ ವಿದ್ಯಾರ್ಥಿಗಳಾದ ಶಾಂಭವಿ ಮತ್ತು ಅಧಿತಿ ಕಾರ್ಯಕ್ರಮವನ್ನು ನಿರೂಪಿಸಿದರು.